top of page
ವಿಶೇಷ ದಿನಗಳು
ವಾರ್ಷಿಕ ವರ್ಧಂತಿ ಉತ್ಸವ
ಪರಮಪೂಜ್ಯ ಗುರುವರ್ಯರ ಮಾರ್ಗದರ್ಶನದಲ್ಲಿ ದೇವಾಲಯದ ವರ್ಧಂತಿ ಉತ್ಸವವೂ ಪ್ರತಿ ವರ್ಷ ಪಾಲ್ಗುಣ ಮಾಸ ದ್ವಿತೀಯದಂದು ನಡೆಯುತ್ತದೆ. ಇದಕ್ಕೆ ಪೂರಕವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮಹಾ ಅನ್ನಸಂತರ್ಪಣಾ ಕಾರ್ಯಗಳೊಂದಿಗೆ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.
ಸನ್ನಿಧಿಯಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ನಡೆಯುವ ಶ್ರೀ ಮಹಾಲಸಾ ದೇವಿಯ ರಥಾರೋಹಣ ಹಾಗೂ ಪಲ್ಲಕ್ಕಿಯು ಪ್ರತಿಷ್ಠಾ ವರ್ಧಂತಿಯ ದಿನದಂದೇ ಅತ್ಯಂತ ವೈಭವದಿಂದ ನಡೆಯುತ್ತದೆ.
ಉತ್ಸವದ ಮೂರು ದಿನಗಳ ಕಾಲ ನಿರಂತರವಾಗಿ ಅನ್ನಸಂತರ್ಪಣೆ ಹಾಗೂ ಮಾರುತಿ ರಂಗ ಮಂದಿರದಲ್ಲಿ ನಾಡಿನ ಹೆಸರಾಂತ ಕಲಾವಿದರುಗಳ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ.
ಉತ್ಸವದ ಸಂದರ್ಭದಲ್ಲಿ ದೇಗುಲ ಹಾಗೂ ಸುತ್ತಮುತ್ತಲಿನಲ್ಲಿ ಅಳವಡಿಸಿದ ದೀಪಾಲಂಕೃತವೂ ಕಣ್ಮನ ಸೆಳೆಯುತ್ತದೆ. ಶ್ರೀ ಚೌಡೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವವು ವರ್ಧಂತಿ ಉತ್ಸವದ ಸಂದರ್ಭದಲ್ಲಿ ವಿಶೇಷವಾಗಿ ನೆರವೇರಲಿದೆ. ಉತ್ಸವಕ್ಕೆ ನಾಡಿನ ವಿವಿಧೆಡೆಗಳಿಂದ ಆಗಮಿಸುವ ಭಕ್ತ ಸಮೂಹ ತಮ್ಮ ಹರಕೆಗಳನ್ನು ಸಮರ್ಪಿಸಿ ಭಕ್ತಿಯಿಂದ ನಡೆದುಕೊಳ್ಳುತ್ತಾರೆ.
ನವರಾತ್ರಿ ಉತ್ಸವ
ನವರಾತ್ರಿ ಪ್ರಯುಕ್ತ ದೇಗುಲದಲ್ಲಿ ಒಂಭತ್ತು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರುಗುತ್ತದೆ. ದೇವಾಲಯದಲ್ಲಿ ಪ್ರತಿ ನಿತ್ಯ ವಿಶೇಷ ಪುಷ್ಪಾಲಂಕಾರ ಸೇವೆ, ದರುಶನ ಮುಖೇನ ಪ್ರಸಾದ ವಿತರಣೆ, ಸುಮಂಗಲಿಯರಿಂದ ಸಾಮೂಹಿಕ ಕುಂಕುಮಾರ್ಚನೆ, ನಾಡಿನ ವಿವಿಧ ತಂಡದವರಿಂದ ಭಕ್ತಿ ಭಜನೆ ಹಾಗೂ ಆಗಮಿಸಿದ ಸಮಸ್ತ ಭಕ್ತರಿಗೆ ನಿತ್ಯವೂ ಅನ್ನಸಂತರ್ಪಣಾ ಕಾರ್ಯ ನೆರವೇರುತ್ತದೆ. ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ನೆರವೇರುವ ಶ್ರೀ ದುರ್ಗಾ ನಮಸ್ಕಾರ ಪೂಜೆಯು ಇಲ್ಲಿ ಅತ್ಯಂತ ವಿಶೇಷತೆಯನ್ನು ಪಡೆದುಕೊಂಡಿದೆ. ದುರ್ಗಾ ನಮಸ್ಕಾರ ದಿನದಂದು ದುರ್ಗೆಯ ವಿಶೇಷ ಪೂಜಾ ಕಾರ್ಯಗಳೊಂದಿಗೆ ದೇಗುಲಕ್ಕೆ ಆಗಮಿಸುವ ಮುತೈದೆಯರಿಗೆ ದರುಶನ ಮುಖೇನ ಉಡಿ ಸಮರ್ಪಿಸಲಾಗುತ್ತದೆ. ಒಂಭತ್ತು ದಿನಗಳ ಕಾಲ ಅತ್ಯಂತ ವೈಭವಯುತವಾಗಿ ನೆರವೇರುವ ನವರಾತ್ರಿ ಉತ್ಸವದ ಹತ್ತನೇ ದಿನವಾದ ವಿಜಯದಶಮಿಯಂದು ಸಂಜೆ ಶ್ರೀ ಚೌಡೇಶ್ವರಿ ದೇವಿಯ ಪಲ್ಲಕ್ಕಿಯ ವಿಜಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅಮಾವಾಸ್ಯೆ ಉತ್ಸವ
ನವರಾತ್ರಿ ಪ್ರಯುಕ್ತ ದೇಗುಲದಲ್ಲಿ ಒಂಭತ್ತು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರುಗುತ್ತದೆ. ದೇವಾಲಯದಲ್ಲಿ ಪ್ರತಿ ನಿತ್ಯ ವಿಶೇಷ ಪುಷ್ಪಾಲಂಕಾರ ಸೇವೆ, ದರುಶನ ಮುಖೇನ ಪ್ರಸಾದ ವಿತರಣೆ, ಸುಮಂಗಲಿಯರಿಂದ ಸಾಮೂಹಿಕ ಕುಂಕುಮಾರ್ಚನೆ, ನಾಡಿನ ವಿವಿಧ ತಂಡದವರಿಂದ ಭಕ್ತಿ ಭಜನೆ ಹಾಗೂ ಆಗಮಿಸಿದ ಸಮಸ್ತ ಭಕ್ತರಿಗೆ ನಿತ್ಯವೂ ಅನ್ನಸಂತರ್ಪಣಾ ಕಾರ್ಯ ನೆರವೇರುತ್ತದೆ. ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ನೆರವೇರುವ ಶ್ರೀದುರ್ಗಾ ನಮಸ್ಕಾರ ಪೂಜೆಯು ಇಲ್ಲಿ ಅತ್ಯಂತ ವಿಶೇಷತೆಯನ್ನು ಪಡೆದುಕೊಂಡಿದೆ. ದುರ್ಗಾ ನಮಸ್ಕಾರ ದಿನದಂದು ದುರ್ಗೆಯ ವಿಶೇಷ ಪೂಜಾ ಕಾರ್ಯಗಳೊಂದಿಗೆ ದೇಗುಲಕ್ಕೆ ಆಗಮಿಸುವ ಮುತೈದೆಯರಿಗೆ ದರುಶನ ಮುಖೇನ ಉಡಿ ಸಮರ್ಪಿಸಲಾಗುತ್ತದೆ. ಒಂಭತ್ತು ದಿನಗಳ ಕಾಲ ಅತ್ಯಂತ ವೈಭವಯುತವಾಗಿ ನೆರವೇರುವ ನವರಾತ್ರಿ ಉತ್ಸವವು ಹತ್ತನೇ ದಿನವಾದ ವಿಜಯದಶಮಿಯಂದು ಸಂಜೆ ಶ್ರೀ ಚೌಡೇಶ್ವರಿ ದೇವಿಯ ಪಲ್ಲಕ್ಕಿಯ ವಿಜಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
bottom of page