top of page
ಪರಮಪೂಜ್ಯ ಶ್ರೀಮದ್ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ
ಮತ್ತು
ಪರಮಪೂಜ್ಯ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ
ವಿಷ್ಣುಸ್ವರೂಪಿಣಿ ಶ್ರೀ ಮಹಾಲಸಾ ನಾರಾಯಣಿ ದೇವಿ
ಗೋವಾ ರಾಜ್ಯದ ಮಾರ್ದೊಳ ಕ್ಷೇತ್ರದಲ್ಲಿ ಸಹಸ್ರಾರು ಭಕ್ತರ ಕುಲದೇವಿಯಾಗಿ ನೆಲೆಗೊಂಡಿರುವ ಶ್ರೀ ಮಹಾಲಸಾ ನಾರಾಯಣಿ ದೇವಿಯು ರಕ್ಕಸರ ಮರ್ದನಕ್ಕಾಗಿ ಮೋಹಿನಿ ಅವತಾರ ತಾಳಿರುವ ವಿಷ್ಣುಸ್ವರೂಪಿಣಿಯೆಂದು ಪುರಾಣದಲ್ಲಿ ಉಲ್ಲೇಖ.
ಧರ್ಮದರ್ಶಿಗಳ ಕುಟುಂಬದ ಕುಲದೇವತೆಯಾಗಿ ಕಾರ್ಗಲ್ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡು ಸಕಲ ಭಕ್ತಕುಲವನ್ನು ಸಲಹುತ್ತಿರುವ ದೇವಿಗೆ ಶ್ರೀ ಕ್ಷೇತ್ರದಲ್ಲಿ ಪ್ರತಿ ವರ್ಷ ನೆರವೇರುವ ಜಾತ್ರೊತ್ಸವದ ಪ್ರತಿಷ್ಠಾ ವರ್ಧಂತಿಯ ದಿನದಂದು ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಸೇವೆಯು ಜರುಗಲಿದೆ.
ಶ್ರೀ ಸಿದ್ದಪುರುಷ
ಮಹತ್ತರವಾದ ತಪಸನ್ನು ಆಚರಿಸಿ ಸಕಲವನ್ನು ಸಿಧ್ದಿಸಿಕೊಂಡ ತಪಸ್ವಿಯು ಶ್ರೀ ಕ್ಷೇತ್ರದಲ್ಲಿ ಹುತ್ತದ ರೂಪದಲ್ಲಿ ಸ್ಥಾಪಿತರಾಗಿದ್ದರೆ ಎಂಬುದು ಇತಿಹಾಸ. ತನ್ನಲ್ಲಿ ಅಚಲ ಭಕ್ತಿಯಿಟ್ಟು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಹುತ್ತದಿಂದ ಪ್ರಸಾದದ ರೂಪದಲ್ಲಿ ಹೂವನ್ನು ನೀಡಿ ಅಭಯ ನೀಡುತ್ತಿರುವುದನ್ನು ಕಾಣಬಹುದಾಗಿದೆ. ದರುಶನ ಮುಖೇನ ಆಹ್ವಾಹನೆಗೊಂಡು ಸಮಸ್ತ ಭಕ್ತರ ಸಮಸ್ಯೆಗಳಿಗೆ ವಿಚಾರಣೆಯ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ.
ಜಗನ್ಮಾತೆ ಶ್ರೀ ಚೌಡೇಶ್ವರಿ ದೇವಿ
ಶ್ರೀ ಕ್ಷೇತ್ರದ ಪ್ರಮುಖ ದೇವಿಯಾಗಿ ಬಿಂಬದ ರೂಪದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಚೌಡೇಶ್ವರಿ ದೇವಿಯು ಅತ್ಯಂತ ಶಕ್ತಿಯುತಳಾಗಿ ಸಕಲ ಭಕ್ತರನ್ನು ಹರಸುತ್ತಾ ಶ್ರೀ ಕ್ಷೇತ್ರವನ್ನು ತನ್ನ ಮಾರ್ಗದರ್ಶನದಿಂದ ಅಭಿವೃದ್ಧಿಪಡಿಸುತ್ತಿರುವನ್ನು ನೋಡಬಹುದಾಗಿದೆ. ಸರ್ವಾಲಂಕೃತಳಾಗಿ ಪಲ್ಲಕ್ಕಿಯಲ್ಲಿ ವಿರಾಜಮಾನಗೊಂಡು ಭಕ್ತರಿಂದ ತನ್ನ ಪಲ್ಲಕಿ ಸೇವೆಯನ್ನು ಅತೀ ವಿಜೃಂಭಣೆಯಿಂದ ನೇರವೇರಿಸಿಕೊಳುತ್ತಿರುವುದು ಶ್ರೀ ಕ್ಷೇತ್ರದ ವಿಶೇಷತೆಗಳಲ್ಲಿ ಒಂದಾಗಿದೆ.
ಶ್ರೀ ಮಾರುತಿ
ಗರ್ಭಗುಡಿಯಲ್ಲಿ ಪರಿವಾರ ದೇವರುಗಳೊಂದಿಗೆ ಅಭಯ ಹಸ್ತವನ್ನು ಭಕ್ತರೆಡೆಗೆ ತೋರುತ್ತಿರುವ ಭಂಗಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಮಾರುತಿ ದೇವರು ಸಕಲ ಭಕ್ತಕೋಟಿಗೆ ಧೈರ್ಯ ಸ್ಥೈರ್ಯಗಳನ್ನು ಕರುಣಿಸುತ್ತಿದ್ದಾರೆ. ವಿಶೇಷ ದಿನಗಳಂದು ಶ್ರೀ ಮಾರುತಿ ದೇವರಿಗೆ ಅಭಿಷೇಕ ಹಾಗೂ ಹನುಮ ಜಯಂತಿ ಉತ್ಸವವು ಕ್ಷೇತ್ರದಲ್ಲಿ ವಿಶೇಷವಾಗಿ ನೆರವೇರುತ್ತದೆ.
ಶ್ರೀ ಗಣಪತಿ
ಶ್ರೀ ಲಕ್ಷ್ಮಿ
ಶ್ರೀ ಚಾಮುಂಡೇಶ್ವರಿ
ಶ್ರೀ ಸರಸ್ವತಿ
ಶ್ರೀ ನಾಗದೇವರು
ಶ್ರೀ ಕ್ಷೇತ್ರದಲ್ಲಿ ವಿಶೇಷವಾಗಿ ನಿರ್ಮಿಸಲ್ಪಟ್ಟಿರುವ ನಾಗರ ಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ನಾಗದೇವರು ಕ್ಷೇತ್ರಕ್ಕೆ ಆಗಮಿಸುವ ಸಹಸ್ರಾರು ಭಕ್ತರ ನಾಗದೋಶ ನಿವಾರಣೆ ಹಾಗೂ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತಿರುವುದನ್ನು ಕಾಣಬಹುದಾಗಿದೆ. ನಾಗದೇವರಿಗೆ ವಿಶೇಷವಾಗಿ ಅಭಿಷೇಕ ಹಾಗೂ ನಾಗರಪಂಚಮಿಯಂದು ಶ್ರೀ ಕ್ಷೇತ್ರದಲ್ಲಿ ನಾದದೇವರ ಆರಾಧನೆಯು ವಿಜೃಂಭನೆಯಿಂದ ನೆರವೇರಲಿದೆ.
ದೇವಾಲಯದ ಮುಂಭಾಗದ ಪೂರ್ವ ದಿಕ್ಕಿನಲ್ಲಿ ನೆಲಸಿರುವ ಶಕ್ತಿಯು, ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಪರಿವಾರ ದೇವರುಗಳ ಆಜ್ಞೆಯನ್ನು ಪಾಲಿಸಿ ಶ್ರೀ ಚೌಡೇಶ್ವರಿ ಸಂಕೀರ್ಣದ ಕ್ಷೇತ್ರಪಾಲಕನಾಗಿ ಕ್ಷೇತ್ರವನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಭಕ್ತರು ಈ ಸ್ಥಾನದಲ್ಲಿ ಹರಕೆಯನ್ನು ಮಾಡಿ ಬಾಳೆಗೊನೆಯನ್ನು ಸಮರ್ಪಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವ ಅನೇಕ ನಿದರ್ಶನಗಳನ್ನು ನೋಡಬಹುದಾಗಿದೆ.
bottom of page